ಬಾರ್ಬೆ, ಮರೀಯಸ್		
ಪ್ರಸಿದ್ಧ ಮಾನವಶಾಸ್ತ್ರಜ್ಞ ಮತ್ತು ಜಾನಪದ ವಿದ್ವಾಂಸ. ಕೆನಡ ಸರ್ಕಾರದ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ 1911ರಿಂದ ಸೇವೆ. ಮಾನವಕುಲಶಾಸ್ತ್ರ ಹ್ಯುರನ್ ಐರೊಕ್ವಿಸ್ಸಿನ ಇತಿಹಾಸ, ಉತ್ತರ ರಾಕಿ ಪರ್ವತ ಪ್ರದೇಶಗಳಲ್ಲಿ ಮತ್ತು ಪೆಸಿಫಿಕ್ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟುಗಳು-ಮುಂತಾದ ವಿಷಯಗಳ ಬಗ್ಗೆ ಶಾಸ್ತ್ರೀಯ ಅಧ್ಯಯನ ನಡೆಸಿದ್ದಾನೆ. 1915ರಲ್ಲಿ ಅಮೆರಿಕನ್ ಫೋಕ್-ಲೋರ್ ಸೊಸೈಟಿಯ ನೆರವಿನಿಂದ ಫ್ರೆಂಚ್ ಭಾಷೆ ಮತ್ತು ಭಾರತದ ಜನಜೀವನವನ್ನು ಕುರಿತು ಅಭ್ಯಾಸ ಮಾಡಿದ. 1917ರಲ್ಲಿ ಅಮೆರಿಕನ್ ಫೋಕ್-ಲೋರ್ ಸೊಸೈಟಿಯ ಅಧ್ಯಕ್ಷ ಪದವಿಗೇರಿದ. 1917ರಲ್ಲಿ ಜರ್ನಲ್ ಆಫ್ ಅಮೆರಿಕನ್ ಫೋಕ್-ಲೋರ್ ಪತ್ರಿಕೆಯ ಸಹ ಸಂಪಾದಕನಾದ. ಫ್ರೆಂಚ್ ಜನಪದ ಸಂಗ್ರಾಹಕರಲ್ಲಿ ಮೊದಲಿಗ. ಲೇವಲ್ ಮತ್ತು ಮಾಂಟ್ರೀಲ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದಾನೆ.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ